ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇನ್ಮುಂದೆ 625 ಕ್ಕೆ 625 ಅಂಕ ಪಡೆಯೋದು ವಿದ್ಯಾರ್ಥಿಗಳಿಗೆ ಅಷ್ಟು ಸುಲಭವಲ್ಲ. ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ ಔಟ್ ಆಫ್ ಔಟ್ ತೆಗೆಯೋರ ಸಂಖ್ಯೆ ಹೆಚ್ಚಾಗಿದೆ. ಇಷ್ಟು ಪ್ರಮಾಣದಲ್ಲಿ ಅಂಕ ಪಡೆದರೆ ರ್ಯಾಂಕ್ ಅನ್ನೋ ಪದಕ್ಕೆ ಮೌಲ್ಯ ಹೋಗಲಿದೆ. ಹೀಗಾಗಿ, ಎಸ್‍ಎಸ್‍ಎಲ್‍ಸಿ ಬೋರ್ಡ್ ಮೌಲ್ಯಮಾಪನ ವ್ಯವಸ್ಥೆಗೆ ಹೊಸ ನಿಯಮ ಜಾರಿ ಮಾಡಲು ಚಿಂತನೆ ಮಾಡಿದೆ. ಇಷ್ಟು ದಿನ ಒಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಒಬ್ಬರು ಮೌಲ್ಯಮಾಪಕರು ಮೌಲ್ಯಮಾಪನ ಮಾಡುತ್ತಿದ್ದರು. ಆ ವಿಷಯದಲ್ಲಿ ವಿದ್ಯಾರ್ಥಿ ಪೂರ್ಣ ಅಂಕ ಪಡೆದರೆ ಮತ್ತು 625 ಅಂಕ ಪಡೆದರೆ ಮೌಲ್ಯಮಾಪಕರ ನಂತ್ರ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರು ಮತ್ತೊಮ್ಮೆ ಪರಿಶೀಲನೆ ಮಾಡುತ್ತಿದ್ದರು. ಇಬ್ಬರ ಮೌಲ್ಯಮಾಪಕರ ನಂತರವೂ 625 ಅಂಕ ಪಡೆಯೋರ ಸಂಖ್ಯೆ ಹೆಚ್ಚಾಗಿರೋದ್ರೀಂದ ಈಗ ಹೊಸ ನಿಯಮ ಜಾರಿ ಮಾಡಲು ಬೋರ್ಡ್ ಚಿಂತನೆ ಮಾಡಿದೆ. ಔಟ್ ಆಫ್ ಔಟ್ ಪಡೆದ ವಿದ್ಯಾರ್ಥಿ ಉತ್ತರ ಪತ್ರಿಕೆ ಪರಿಶೀಲನೆಗೆ 3 ಸದಸ್ಯರ ವಿಶೇಷ ಸಮಿತಿ ರಚನೆ ಮಾಡಲು ಚಿಂತನೆ ಮಾಡಿದೆ. ಈ ಮೂಲಕ ಮೌಲ್ಯ ಕಳೆದುಕೊಂಡಿರೋ ಔಟ್ ಆಫ್ ಔಟ್‍ಗೆ ಮೌಲ್ಯ ತಂದು ಕೊಡಲು ಬೋರ್ಡ್ ಈ ಚಿಂತನೆ ಮಾಡಿದೆ. ಒಂದು ವೇಳೆ ಸರ್ಕಾರ ಹೊಸ ನಿಯಮಕ್ಕೆ ಒಪ್ಪಿಗೆ ಕೊಟ್ಟರೆ ಮುಂದಿನ ವರ್ಷದಿಂದಲೇ ನಿಯಮ ಜಾರಿ ಆಗಲಿದೆ.
#publictv #newscafe